ಕೆಂಗುಲಾಬಿ
ಮೂಡಣದ ಸೂರ್ಯ ಪಡುವಣದಲ್ಲಿ ನಿಂತಿಹಿನು, ಏಕೊ ಈ ದಿನವೆಕೆ ವರುಷವಾಗಿದೆ, ಭಾರವಾದ ಮನಸ್ಸಿನಿಂದ ಒಂದು ಕ್ಷಣವೂ ಕೂಡ ಬಹು ದೊಡ್ಢದೆನಿಸಿದೆ, ಸೋತ ಕಣ್ಣುಗಳು ಆಯಾಸದಿಂದ ಬಳಲಿವೆ, ಎದ್ದು ನಿಲ್ಲಲು ಏಕೊ ಒಲ್ಲೆ ಎನ್ನುತಿವೆ ದಣಿದ ಕಾಲುಗಳು. ಯಾಕೆ ಇಂದು ಮನಸ್ಸಿಗೆ ತಳಮಳ, ಕೊಂಚ ಕಣ್ಣ ರೆಪ್ಪೆಗಳನ್ನು ಮುಚ್ಚಿ ದಿಂಬಿಗೆ ಒರಗಿದೆ. ಮನಸ್ಸು ಮಿಂಚಂತೆ ಅವಳ ನೆನಪುಗಳಿಗೆ ಜಾರಿತು.
ಅದು ಮಹಾನವಮಿ ಸಂಬ್ರಮ, ನೀರೆಯರು ನೇರಗಿನ ಸಿರೆಯುಟ್ಟು ನವಿಲಿನಂತೆ ನಲಿಯುತಿಹರು, ಆಕಾಶದ ಕಡು ನೀಲಿ ಬಣ್ಣ, ಎತ್ತರ ಮರಗಳ ತಂಪಾದ ಗಾಳಿ, ಮನೆಗಳಿಗೆ ಅಲಂಕರಿಸಿದ ಹಸಿರು ತೋರಣ, ರಸ್ತೆ ಅಗಲ ಬಣ್ಣದ ರಂಗೋಲಿ ಇವೆಲ್ಲವೂ ಸಂರ್ಭಮದ ಮಹಾನವಮಿಗೆ ಸಾಕ್ಷಿಯಾಗಿದ್ದವು. ಇದ್ದಕ್ಕಿದ್ದಂತೆ ಎದೆಯಲ್ಲಿ ತಂಗಾಳಿ ನುಸುಳಿತು ಯಾಕೆಂದು ಕತ್ತು ಹೊರಳಿಸಿದರೆ, ಅವಳ ಉದ್ದನೆಯ ಕೂದಲಿನ ಜಡೆ ಅವಳ ನಿತಂಬಗಳಿಗೆ ಸ್ಪರ್ಷಿಸಿತ್ತಿತ್ತು, ಮುಡಿಗೆ ಮುಡಿದ ಕೆಂಗುಲಾಬಿ ಹೂಗಳು ಮುತ್ತಿಕುತ್ತಿದ್ದವು, ಸುಂದರವಾದ ಕಿವಿಗಳಿಗೆ ನಾ ಮುಂದು ತಾ ಮುಂದು ಎಂದು ಕಿವಿ ಓಲೆಗಳು ಜೊತಾದುತ್ತಿದ್ದವು, ಅವಳುಟ್ಟ ಚಿತ್ತಾರದ ರವಿಕೆ ಅವಳನ್ನು ಅಪ್ಪಿತ್ತು, ಅವಳುಟ್ಟ ರೆೇಷ್ಮೆ ಸಿರೆ ಅವಳ ಬಿಂಕದ ನಡಿಗೆಗೆ ನಾಚುತ್ತ ಬಳುಕುತ್ತಿತ್ತು, ಇಳೆಯು ಅವಳ ಪಾದ ಸ್ಪರ್ಷಗಳಿಗೆ ಹವಣಿಸುತ್ತಿತ್ತು. ಎದೆಯಲ್ಲಿ ತಂಗಾಳಿಯು ಜೋರಾಯಿತು. ಮನಸ್ಸು ಮುದಗೊಂಡು ಅವಳ ಕಮಲದಂತಹ ಮುಖ ನೊಡಲು ಕಾತೊರೆಯುತ್ತಿತ್ತು.
ಅವಸ ಅವಸರದಿ ಎದ್ದು ಹೊರಟಾಗ ಮನೆಯ ಬಾಗಿಲ ಹೋಸ್ತಿಲಕ್ಕೆ ಕಾಲೆಡವಿ ದೊಪ್ಪನೆ ನೆಲಕ್ಕುರುಳಿ ಬಿಟ್ಟೆ. ಕಣ್ಣು ತೆರೆದು ನೋಡಿದಾಗ ನಾ ಬಿದ್ದಿದ್ದು ನಾನು ಮಲಗಿದ ಮಂಚದಿಂದ, ಆಗ ನನಗರಿವಾಯ್ತು ಇದೊಂದು ಭಾನುವಾರದ ಬೆಳಿಗಿನ ಕನಸ್ಸೆಂದು.
ಅವಸ ಅವಸರದಿ ಎದ್ದು ಹೊರಟಾಗ ಮನೆಯ ಬಾಗಿಲ ಹೋಸ್ತಿಲಕ್ಕೆ ಕಾಲೆಡವಿ ದೊಪ್ಪನೆ ನೆಲಕ್ಕುರುಳಿ ಬಿಟ್ಟೆ. ಕಣ್ಣು ತೆರೆದು ನೋಡಿದಾಗ ನಾ ಬಿದ್ದಿದ್ದು ನಾನು ಮಲಗಿದ ಮಂಚದಿಂದ, ಆಗ ನನಗರಿವಾಯ್ತು ಇದೊಂದು ಭಾನುವಾರದ ಬೆಳಿಗಿನ ಕನಸ್ಸೆಂದು.
ಇಂತಿ ನಿಮ್ಮ
ಶಂಭು
ಶಂಭು

No comments:
Post a Comment