Sunday, 19 January 2020

ನೆನಪು

ನೆನಪು

ನೆನಪು ಹಳೆಯದಾದರೇನು 
ಅವುಗಳ ಮೆಲಕು ನನ್ನ ಉಸಿರಿಂದ,
ಒಡಲಾಳದ ಧ್ವನಿಯೊಂದು ಕೇಳಿದೆ 
ಏಳು ಜನ್ಮದ ಪ್ರೀತಿ ನಿನ್ನಿಂದ ,
ಹುಣ್ಣಮೆ ಬೆಳದಿಂಗಳ ಬೆಳಕಲ್ಲಿ 
ನಡೆದಿಹೆನು ನಿನ್ನ ನೆನಪುಗಳ ಊರಿಂದ,
ಚಂದಮಾಮ ಕೇಳಿದನು 
ಎಲ್ಲಿಗೆ ನಿನ್ನ ಪಯಣ ಬೇಸರದಿಂದ,
ದೂರದ ಕನಸುಗಳೂರಿಗೆ 
ನೆನಪುಗಳ ಬಿಚ್ಚಿಡಲು ಒಲವಿನಿಂದ,
ಬಾನ ಎಲ್ಲೆ ದಾಟಿದರೂ
ಎಲ್ಲವೂ ತುಂಬಿವೆ ನಿನ್ನ ನೆನುಪುಗಳಿಂದ.
.........................ನಿನ್ನ ಹುಡ್ಗ್ (ಶಂಭು)

No comments:

Post a Comment